ಈ ಕನಸು

ಇದು ವರ್ಷದ ಕನಸು...

11:22 AM

ಆನಂದ್ ಪಟವರ್ಧನ್

Posted by techguru

ಸಿನೆಮಾ.

ಡಾಕ್ಯೂಮೆಂಟರಿ ಲೋಕದ ಅಮೂಲ್ಯ ರತ್ನ

ಆನಂದ್ ಪಟವರ್ಧನ್

ಸಾವಿನ ಮನೆ ತುಂಬಾ ಹಬ್ಬದ ಸಡಗರ... ಎಲ್ಲರ ಮುಖದಲ್ಲೂ ಸಂತಸದ ಛಾಯೆ... ಆಕೆ ರೂಪ್ಕನ್ವರ್. ಪತಿ ಗತಿಸಿ ಕೆಲವೇ ಗಂಟೆಗಳಾಗಿವೆ. ಪತಿಯ ಚಿತೆಗೆ ಹಾರಿ ಸತಿಯಾಗಲು ಆಕೆ ಸರ್ವಸನ್ನದ್ಧೆ. ತನ್ನ ಏಕಮಾತ್ರ ಪುತ್ರಿ ಇನ್ನೇನು ಸತಿಯಾಗಿ ದೇವಕೃಪೆಗೆ ಪಾತ್ರಳಾಗುತ್ತಾಳೆಂಬ ಸಂತಸ ಹೆತ್ತ ತಾಯಿಗೆ... ಅಕ್ಕ ಸತಿದೇವಿಯಾಗುವಳೆಂಬ ಭಕ್ತಿಭಾವ ತಮ್ಮನಿಗೆ... ಚಿತೆ ಉರಿಯಿತು. ಆಕೆ ಚಿತೆಗೆ ಆಹುತಿಯಾದಳು. ಅಗ್ನಿಜ್ವಾಲೆ ಆಕೆಯನ್ನು ಆವರಿಸುತ್ತಿದ್ದಂತೆಯೇ ನೆರೆದವರ ಜಯಕಾರ ಮುಗಿಲು ಮುಟ್ಟಿತು. ರೂಪ್ಕನ್ವರ್ ಕೀ ಜಯ್ ಹೋ... ಜಯಕಾರದ ನಡುವೆ ಆಕೆಯ ನೋವಿನ ಆಕ್ರಂದನ ಉಡುಗಿಹೋಯಿತು. ಆನಂದ್ ಪಟವರ್ಧನ್ ನಿದರ್ೇಶನದ 'ಫಾದರ್ ಸನ್ ಆಂಡ್ ಹೋಲಿವಾರ್' ಸಾಕ್ಷ್ಯಚಿತ್ರದಲ್ಲಿ ಬಿಂಬಿತವಾದ ವಾಸ್ತವಿಕ ದೃಶ್ಯ ಇದು. ನೂರಿಪ್ಪತ್ತು ನಿಮಿಷಗಳ ಈ ಕಲರ್ ಸಾಕ್ಷ್ಯಚಿತ್ರ ಬಿಡುಗಡೆಗೊಂಡದ್ದು ಹದಿಮೂರು ವರುಷಗಳ ಹಿಂದೆ. ಆದರೆ... ಇಂದಿಗೂ ಇದು ಅಷ್ಟೇ ಪ್ರಸ್ತುತ.

ಕಳೆದ ಎರಡು ದಶಕಗಳಿಂದ ಭಾರತೀಯ ಸಮಾಜದ ರಾಜಕೀಯ, ಧಾಮರ್ಿಕ ಸೂಕ್ಷ್ಮಗಳನ್ನು ಅರಿತು ಅವನ್ನು ಯಶಸ್ವಿಯಾಗಿ ತಮ್ಮ ಚಿತ್ರದಲ್ಲಿ ಅಳವಡಿಸಿಕೊಂಡವರು ಆನಂದ್ ಪಟವರ್ಧನ್. ಧಮರ್ಾಂಧತೆ, ಮೂಢನಂಬಿಕೆಗಳ ಜ್ವಾಲೆಯಲ್ಲಿ ಹೊತ್ತಿ ಉರಿಯುತ್ತಿರುವ ಭಾರತ ಇವರ ಸಾಕ್ಷ್ಯಚಿತ್ರಗಳ ಸಾಮಾನ್ಯ ಕಥಾವಸ್ತು. ನಿದರ್ೇಶಿಸಿರುವ ಚಿತ್ರಗಳು ಬೆರಳೆಣಿಕೆಯಷ್ಟು... ಆದರೆ ಅವೆಲ್ಲವೂ ನಮ್ಮ ಸಮಾಜದ ನೈಜ ಚಿತ್ತಗಳೇ. 1950ರಲ್ಲಿ ಮಹಾರಾಷ್ಟ್ರದ ಗಾಂಧಿ ಅನುಯಾಯಿ ಕುಟುಂಬವೊಂದರಲ್ಲಿ ಜನಿಸಿದ ಪಟವರ್ಧನ್ ತಮ್ಮ ಸಾಮಾಜಿಕ ಸಂಪ್ರದಾಯದ ಸಾಕ್ಷ್ಯಚಿತ್ರಗಳಿಂದ ಮನೆಮಾತಾದವರು... ಪಕ್ಕಾ ಕಮಷರ್ಿಯಲ್ ಚಿತ್ರಗಳ ಈ ಕಾಲದಲ್ಲೂ ಡಾಕ್ಯೂವೆಂಟರಿಗಳನ್ನು ನಿದರ್ೇಶಿಸಿ ಜನಮನ ಗೆದ್ದವರು. ಭೃಷ್ಟಾಚಾರ, ಧಮರ್ಾಂಧತೆ, ನಿರಾಶ್ರಿತರ ಸಮಸ್ಯೆ, ಕೋಮು ಸಂಬಂಧೀ ವಿಚಾರಗಳ ಸುತ್ತ ಗಿರಕಿ ಹೊಡೆಯುವ ಪಟವರ್ಧನರ ಸಾಕ್ಷ್ಯಚಿತ್ರಗಳ ಅದೆಷ್ಟೋ ಬಾರಿ ಸೆನ್ಸಾರ್ ಮಂಡಳಿಯ ಕೆಂಗಣ್ಣಿಗೆ ಗುರಿಯಾಗಿವೆ. ಕೆಲವು ಸಾಕ್ಷ್ಯಚಿತ್ರಗಳಂತೂ ಪದೇ ಪದೇ ಸೆನ್ಸಾರ್ ಕತ್ತರಿಗೆ ಸಿಲುಕಿ ತಮ್ಮ ಮೂಲ ರೂಪವನ್ನೇ ಕಳೆದುಕೊಂಡಿವೆ.

ಪಟವರ್ಧನ್ರ ಸಾಕ್ಷ್ಯಚಿತ್ರಗಳಲ್ಲಿ ಮಾನವೀಯ ತುಡಿತವಿದೆ. ಮಧ್ಯಮ ವರ್ಗದ ಬದುಕು - ಬವಣೆ ಇವರ ಸಾಕ್ಷ್ಯಚಿತ್ರಗಳ ಅವಿಭಾಜ್ಯ ಅಂಗ. ಸೂಕ್ಷ್ಮ ವಿಚಾರಗಳನ್ನು ವ್ಯಂಗ್ಯಾತ್ಮಕವಾಗಿ ವೀಕ್ಷಕರ ಮನ ನಾಟುವಂತೆ ಬಿಂಬಿಸುವುದು ಪಟವರ್ಧನರ ಹೊಸ ಸಿನಿಮಾ ಟೆಕ್ನಿಕ್. ಸಾಕ್ಷ್ಯಚಿತ್ರಗಳಲ್ಲಿ ವಾಸ್ತವತೆ ಹಾಗೂ ವ್ಯಂಗ್ಯವನ್ನು ಅಸಹಜವೆನಿಸದಷ್ಟು ಸಮರ್ಪಕವಾಗಿ ಇವರು ಬಳಸಿಕೊಳ್ಳುತ್ತಾರೆ. ತಮ್ಮ ಹೆಚ್ಚಿನ ಸಾಕ್ಷ್ಯಚಿತ್ರಗಳಿಗೆ ತಾವೇ ಸಿ್ಕೃಪ್ಟ್ ರಚಿಸಿ ಪವರ್ಫುಲ್ ಶಬ್ದಗಳಿಂದ ನೋಡುಗರ ಮನಸ್ಸಿಗೆ ಪಂಚ್ ನೀಡುವ ಅದ್ಭುತ ಶಕ್ತಿ ಪಟವರ್ಧನರಿಗಿದೆ.

ಓರ್ವ ನಿದರ್ೇಶಕರಿಗೆ ಹೆಚ್ಚಾಗಿ ಆನಂದ್ಜೀ ಸಾಮಾಜಿಕ ಕಾರ್ಯಕರ್ತರು. ನಿಸ್ವಾರ್ಥ ಸಮಾಜ ಸೇವೆ ಇವರ ಜೀವನದ ಗುರಿ. ಈ ಗುರಿಯನ್ನು ತಲುಪಲು ಅವರು ಆರಿಸಿಕೊಂಡ ದಾರಿ ಸಾಕ್ಷ್ಯಚಿತ್ರಗಳು... ತಮ್ಮ ಸಾಕ್ಷ್ಯಚಿತ್ರಗಳ ಮೂಲಕ ಸಾಮಾಜಿಕ ಕ್ರಾಂತಿಯೊಂದಕ್ಕೆ ನಾಂದಿ ಹಾಡಬೇಕು... ಸಮಾಜದ ಶೋಷಿತ ವರ್ಗದ ದನಿಯಾಗಬೇಕು... ಇದು ಇವರ ಬಹುದಿನದ ಕನಸು. ಈ ಕನಸನ್ನು ಸಾಕಾರಗೊಳಿಸಲು ಇವರು ನಿದರ್ೇಶಿಸಿರುವ ಸಾಕ್ಷ್ಯಚಿತ್ರಗಳು ಆಪರೇಶನ್ ಮಿಲ್ವರ್ಕರ್, ಫಿಷಿಂಗ್ ಇನ್ ದಿ ಸೀ ಆಫ್ ಗ್ರೀಡ್ ಹಾಗೂ ನರ್ಮದಾ ಡೈರಿ.

ಪಟವರ್ಧನ್ ಸಾಕ್ಷ್ಯಚಿತ್ರಗಳಿಗೆ ಅವರೇ ಡೈರೆಕ್ಟರ್, ಎಡಿಟರ್, ಪ್ರೊಡ್ಯೂಸರ್ ಎಲ್ಲಾ... ಮೊದಮೊದಲು ಬಜೆಟ್ ಸಮಸ್ಯೆಯಿಂದ ಸ್ವತಃ ತಾವೇ ಎಲ್ಲಾ ಕೆಲಸಗಳನ್ನು ನಿರ್ವಹಿಸುತ್ತಿದ್ದರು. ಆದರೆ ಬಳಿಕ ಅದೇ ಹವ್ಯಾಸವಾಯಿತು.

ಇವರ ಸಾಕ್ಷ್ಯಚಿತ್ರಗಳಲ್ಲಿ ಸಮಸ್ಯೆಗಳಿವೆ. ಆದರೆ... ಸಮಾಧಾನಗಳಿಲ್ಲ. ಅವನ್ನು ಹುಡುಕುವ ಕೆಲಸ ವೀಕ್ಷಕರದ್ದು.ನೋಡುಗರನ್ನು ಆರೋಗ್ಯಕರ ಚಿಂತನೆಗೆ ತಳ್ಳಿ ಆ ಮೂಲಕ ಅವರು ಸಮಾಜದ ಸಮಸ್ಯೆಗಳಿಗೆ ಸ್ಪಂದಿಸುವಂತೆ ಮಾಡುವುದು ಪಟವರ್ಧನರ ಉದ್ದೇಶ. 'ಸಿನಿಮಾ ಮೇಕಿಂಗ್ ನನಗೆ ಹುಟ್ಟಿನಿಂದ ಬಂದಿಲ್ಲ. ಸಿನಿಮಾದ ಕಲಾ ಪ್ರಕಾರದ ಬಗ್ಗೆ ನಾನು ತಲೆಕೆಡಿಸಿಕೊಂಡಿಲ್ಲ. ನನ್ನ ಸಾಕ್ಷ್ಯಚಿತ್ರಗಳಿಂದ ದೇಶದ ಸಮಸ್ಯೆಗಳ ಅರಿವು ಜನತೆಗಾದರೆ ಅದೇ ನನಗೆ ದೊರಕುವ ಶ್ರೇಷ್ಠ ಪುರಸ್ಕಾರ' ಎನ್ನುತ್ತಾರೆ ಆನಂದ್ ಪಟವರ್ಧನ್.

ಕ್ಷತಾ ಸಿ.ಎಚ್.